ಭಟ್ಕಳ:ಡಾ.ಚಿತ್ತರಂಜನ ಅವರು ಅಂದು ಭಟ್ಕಳದಲ್ಲಿ ಚಾಲನೆ ನಿಡಿದ ಸಂಘಟನೆ ಇಂದು ಹೆಮ್ಮರವಾಗಿ ಬೆಳೆದಿದೆ. ಭಟ್ಕಳದ ಇತಿಹಾಸದಲ್ಲೆ ಇಂದು ಬ್ರಹತ್ ಸಂಖ್ಯೆಯ ಗಣವೇಷಧಾರಿಗಳು ಭಾಗವಹಿಸಿದ್ದಾರೆ. ಇದೊಂದು ಉತ್ತಮ ಬೆಳವಣಿಗೆ. ಒಂದೊಮ್ಮೆ ಡಾ. ಚಿತ್ತರಜನ್ ಇದ್ದಿದ್ದರೆ ಅವರು ಆನಂದ ಬಾಷ್ಪ ಸುರಿಸುತ್ತಿದ್ದರು ಎಂದು ರಾಷ್ಟಿçÃಯ ಸ್ವಯಂಸೇವಕ ಸಂಘದ ವಕ್ತಾರ ಕಿರಣಗುಡ್ಡದಕೆರಿ ಹೇಳಿದರು.
ಅವರು ಭಟ್ಕಳ ಆರ್ ಎಸ್ ಎಸ್ ವತಿಯಿಂದ ವಿಜಯದಶಮಿ ಪ್ರಯುಕ್ತ ನಡೆದ ಗಣವೇಷಧಾರಿ ಸ್ವಯಂ ಸೇವಕರಿಂದ ಪಥಸಂಚಲನ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಮಾತನಾಡಿದರು. ಇಲ್ಲಿನ ಅಮಾಜವನ್ನು, ಇಲ್ಲಿನ ಮಾನಸಿಕತೆಯನ್ನು ಅರ್ಥಮಾಡಿಕೊಂಡು ೯೭ ವರ್ಷದ ಹಿಂದೆ ಡಾ. ಕೆ.ಬಿ ಹೆಗಡೆವಾರ ನಿತ್ಯ ಶಾಖೆಯನ್ನು ಅರಂಬಿಸಿದ್ದರು. ಅಂದು ಸಮಾಜದ ಕುರಿತು ಯಾರು ಚಿಂತಿಸುತ್ತಿರಲಿಲ್ಲ. ಇದಕ್ಕೆ ಬದಲಾವಣೆ ತರಲು ಬಯಸಿ ಅಂದು ನಿತ್ಯ ಶಾಖೆ ಪ್ರಾರಂಭಿಸಿದರು. ಒಂದು ಕಡೆ ಒಂದೆ ದಿಕ್ಕನಲ್ಲಿ ಯೋಚನೆ ಮಾಡುವ ಜನರನ್ನು ರೂಪಿಸಿದ್ದೆ ರಾಷ್ಟ್ರೀಯ ಸ್ವಯಂ ಸೇವಕರ ಸಂಘ. ಸಂಘಕ್ಕೆ ಬಂದ ಸ್ವಯಂ ಸೇವಕ ರಾಷ್ಟ್ರದ ಯಾವುದೆ ಮೂಲೆಯಲ್ಲಿ ಹಿಂದೂ ಸಮಾಜ ತೊಂದರೆ ಅನುಭವಿಸಿದರೂ ಮಿಡಿಯುತ್ತಾನೆ. ಸಂಘದ ಕ್ಷಣಕ್ಷಣ ಕಾರ್ಯಕ್ರಮದಲ್ಲೂ ದೇಶ ಭಕ್ತಿ, ಅಭಿಮಾನ ಬೆಳೆಸುತ್ತದೆ. ಗ್ರಾಮೀಣ ಭಾಗದಿಂದ ಯುವಜನತೆ ಫಲಾಯನ ಮಾಡುತ್ತಿದ್ದು ಅವರನ್ನು ಗ್ರಾಮದಲ್ಲಿ ಉಳಿಸಲು ಸಂಘ ವಿವಿದ ಯೋಜನೆ ರೂಪಿಸುತ್ತಿದೆ. ಸಂಘ ಇಂದು ಈ ಸ್ಥಿತಿಗೆ ಬರಲು ಮೂರು ಹಂತಗಳನ್ನು ದಾಟಿ ಬಂದಿದೆ.ಸAಘ ಕಳೆಸ ೯೭ ವರ್ಷಗಳಿಂದ ನಿಷ್ವಾರ್ಥ ಸೇವೆ ಸಲ್ಲಿಸುವ ವ್ಯಕ್ತಿಗಳನ್ನುನಿಮಿರ್ಸಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ತೆ ವಹಿಸಿ ಸುಭಾಶ ಮಹಾಬಲೆಶ್ವರ ಶೆಟ್ಟಿ ಮಾತನಾಡಿದರು. ಪಶ್ಚಿಮ ಘಟ್ಟದ ಅರಣ್ಯ ಸಂರಕ್ಷಣಾ ಪಡೆಯ ಅಧ್ಯಕ್ಷ ಗೋವಿಂದ ನಾಯ್ಕ, ರಾಜ್ಯ ಖಾದಿ ಗ್ರಾಮೋದ್ಯೋಗ ರಾಜ್ಯ ಸಭೆಯ ಸದಸ್ಯ ಮುಕುಂದ ನಾಯ್ಕ, ಕೃಷ್ಣಾ ನಾಯ್ಕ ಸೇರಿ ೭೩೨ ಜನ ಗಣವೇ಼ಧಾರಿಗಳು ಇದ್ದರು.
ಮದ್ಯಾಹ್ನ ೩.೪೫ಕ್ಕೆ ಭಟ್ಕಳ ನ್ಯೂ ಇಂಗ್ಲೀಷ ಶಾಲೆಯಿಂದ ಪ್ರಾರಂಭವಾದ ಪಥಸಂಚಲನ ಬಂದರ ರಸ್ತೆ, ಸರ್ಕಲ್, ಹಳೆ ಬಸ್ ನಿಲ್ದಾಣ, ರಘುನಾಥ ರಸ್ತೆಯ ಮೂಲಕ ಮತ್ತೆ ನ್ಯೂ ಇಂಗ್ಲೀಷ ಶಾಲೆಯಲ್ಲಿ ಸೇರಿತು.